



ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಬರೂಯಿಪುರದಲ್ಲಿ 12 ವರ್ಷದ ಬಾಲಕಿಯ ಶವ (Girl Murder) ಗೋಣಿಚೀಲದಲ್ಲಿ ಪತ್ತೆಯಾದ ಪ್ರಕರಣದ ಬೆನ್ನಲ್ಲೇ, ಶಂಕಿತ ರೇಪ್ ಆರೋಪಿಯನ್ನ ಸ್ಥಳೀಯರೇ ಹಿಡಿದು ಥಳಿಸಿ ಕೊಂದಿದ್ದಾರೆ.


ಸ್ನೇಹಿತನಿಗೆ ಗಿಫ್ಟ್ ತರಲು ಹೋಗಿದ್ದ ಬಾಲಕಿ ಶನಿವಾರ ನಾಪತ್ತೆಯಾಗಿದ್ದಳು. ಬಾಲಕಿಯನ್ನು ನಾಲ್ವರು ಅಪರಿಚಿತರು ಎಳೆದುಕೊಂಡು ಹೋಗಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದರು. ಬಳಿಕ ಆಕೆಯ ಶವ ಗೋಣಿಚೀಲದಲ್ಲಿ ಪತ್ತೆಯಾಗಿತ್ತು.

ಬಾಲಕಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಬಾಲಕಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ರಸ್ತೆ ತಡೆ ನಡೆದು, ಟೈರ್‌ಗಳಿಗೆ ಬೆಂಕಿ ಹಚ್ಚಿ, ಪೊಲೀಸ್ ವಾಹನಗಳ ಮೇಲೂ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಶಂಕಿತನಾಗಿ ಗುರುತಿಸಲಾದ ವ್ಯಕ್ತಿಯನ್ನು ಹಿಡಿದು ಥಳಿಸಿ ಕೊಂದಿದ್ದಾರೆ ಎನ್ನಲಾಗಿದೆ.
