



ಬೆಂಗಳೂರು: ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು (Safe Footpath Campaign) ಕಾರ್ಯಾರಂಭ ಆಗಿದೆ. ಫುಟ್ಪಾತ್ಗಳ ಮೇಲಿದ್ದ ಅಂಗಡಿಗಳು ಮತ್ತು ಬೋರ್ಡ್ಗಳನ್ನು ಜಿಬಿಎ (GBA) ಸಿಬ್ಬಂದಿ ತೆರವು ಮಾಡುತ್ತಿದ್ದಾರೆ.


ಅಶೋಕ ಪಿಲ್ಲರ್ ಬಳಿ ತೆರವು ಕಾರ್ಯ ಆರಂಭವಾಗಿದೆ. ಅಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಗುತ್ತಿದೆ. ಕೇಂದ್ರ ಪಾಲಿಕೆಯ 16 ಕಡೆ ಒತ್ತುವರಿ ತೆರವಿಗೆ ಮಾರ್ಕ್ ಮಾಡಲಾಗಿದೆ. 4 ಏರಿಯಾಗಳ 16 ಕಡೆಯಲ್ಲಿ ಒತ್ತುವರಿ ತೆರವಾಗಿದೆ. ಶಿವಾಜಿನಗರ 6 ಕಡೆ, ಗಾಂಧಿನಗರದ 4, ಚಿಕ್ಕಪೇಟೆಯ 4, ಚಾಮರಾಜಪೇಟೆಯ 2 ಕಡೆ ಒತ್ತುವರಿ ತೆರವು ನಡೆಯುತ್ತಿದೆ.

ಹೋಟೆಲ್ ಮುಂಭಾಗ ಪ್ರತೇಕ ಟೀ ಅಂಗಡಿ ಇಡಲಾಗಿತ್ತು. ಹೋಟೆಲ ಮಾಲೀಕ ಮರವನ್ನೂ ಬಿಡದೆ ಸಿಟ್ಟಿಂಗ್ ಅರೆಂಜ್ ಮಾಡಿಕೊಂಡಿದ್ದ. ಜಿಬಿಎ ಸಿಬ್ಬಂದಿ ಎಲ್ಲವನ್ನೂ ತೆರವು ಮಾಡುತ್ತಿದ್ದಾರೆ. ಮನವಿ ಮಾಡಿದರೂ ಅವಕಾಶ ನೀಡದೇ ಸಿಬ್ಬಂದಿ ತೆರವು ಮಾಡಿಸುತ್ತಿದ್ದಾರೆ.ನಗರದಲ್ಲಿ ಕೆಲ ಹೋಟೆಲ್ಗಳು ಕೂಡ ಫುಟ್ಪಾತ್ ಒತ್ತವರಿ ತೆರವು ಮಾಡಿಕೊಂಡಿವೆ. ಗ್ರಾಹಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದವು. ಫುಟ್ಪಾತ್ ಮೇಲೆಯೇ ಸೀಟ್ ಹಾಕಿ ವ್ಯವಸ್ಥೆ ಮಾಡಲಾಗಿತ್ತು. ಎಲ್ಲವನ್ನೂ ತೆರವುಗೊಳಿಸಲಾಗುತ್ತಿದೆ.
