Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಪುತ್ತೂರು: ಕಳೆದ ಮೂರು ವರ್ಷಗಳಿಂದ ವಿಜಯ ಸಾಮ್ರಾಟ್ (ರಿ.) ಪುತ್ತೂರು ವತಿಯಿಂದ ಯುವನಾಯಕ ಸಹಜ್ ಜೆ. ರೈ ಬಳಜ್ಜ ಅವರ ಮುಂದಾಳತ್ವದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ ‘ಪುತ್ತೂರ್ದ ಪಿಲಿಗೊಬ್ಬು’ ಕಾರ್ಯಕ್ರಮದ ಸೀಸನ್-4ರ ದಿನಾಂಕ ನಿಗದಿಯಾಗಿದೆ.

Out Look Fashion

ಅಕ್ಟೋಬರ್ 17ರಂದು (ಶನಿವಾರ) ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಈ ಭವ್ಯ ಕಾರ್ಯಕ್ರಮ ನಡೆಯಲಿದ್ದು, ಹುಲಿವೇಷ ಕಲಾವಿದರ ಮನಮೋಹಕ ಪ್ರದರ್ಶನ, ಸಾಂಪ್ರದಾಯಿಕ ನೃತ್ಯ ಹಾಗೂ ತುಳುನಾಡಿನ ಸಾಂಸ್ಕೃತಿಕ ವೈಭವ ಒಂದೇ ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ.

Jaya Refrigeration and Air Condition

ತುಳುನಾಡಿನ ಹೆಮ್ಮೆಯ ಜಾನಪದ ಕಲೆಯಾದ ಹುಲಿವೇಷವನ್ನು ಸಂಭ್ರಮದಿಂದ ಆಚರಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಕಲಾಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹುಲಿವೇಷದ ರೋಚಕ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ವಿಜಯ ಸಾಮ್ರಾಟ್ (ರಿ.) ಪುತ್ತೂರು ಸಂಘಟಕರು ಮನವಿ ಮಾಡಿದ್ದಾರೆ.