Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಳ್ತಂಗಡಿ: ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ಸುಮಾರು ₹7.98 ಲಕ್ಷ ಮೌಲ್ಯದ 60 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

Out Look Fashion

ಪ್ರಕರಣದ ಪಿರ್ಯಾದಿದಾರರಾದ ಕನ್ಯಾಡಿ ನಿವಾಸಿ ಜಯಶ್ರೀ (32) ಅವರು, ಜೂನ್ 20ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ಕೀಯನ್ನು ಮನೆಯ ಸಮೀಪದಲ್ಲೇ ಇಟ್ಟು ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ವಾಪಸ್ ಬಂದಾಗ ಮನೆಯ ಕೋಣೆಯಲ್ಲಿದ್ದ ಗೋದ್ರೆಜ್‌ ಅಲಮಾರಿಯ ಬಾಗಿಲು ತೆರೆದಿರುವುದು ಹಾಗೂ ಒಳಗಿದ್ದ ವಸ್ತುಗಳು ಚಲ್ಲಾಪಿಲ್ಲಿಯಾಗಿರುವುದು ಗಮನಕ್ಕೆ ಬಂದಿದೆ.

Jaya Refrigeration and Air Condition

ಪರಿಶೀಲಿಸಿದ ವೇಳೆ ಅಲಮಾರಿಯಲ್ಲಿಟ್ಟಿದ್ದ ಸುಮಾರು 60 ಗ್ರಾಂ ತೂಕದ ಚಿನ್ನಾಭರಣ ಕಳವಾಗಿರುವುದು ಪತ್ತೆಯಾಗಿದೆ. ಕಳವಾದ ಚಿನ್ನಾಭರಣದ ಅಂದಾಜು ಮೌಲ್ಯ ₹7,98,000 ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಜಯಶ್ರೀ ಅವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 70/2026ರಡಿ ಬಿ.ಎನ್.ಎಸ್. ಕಲಂ 331(3) ಹಾಗೂ 305ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.