Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಂಗಳೂರು: ಧರ್ಮಸ್ಥಳದ(Dharmasthala Conspiracy) ವಿರುದ್ಧ ನಡೆದಿದೆ ಎನ್ನಲಾದ ಷಡ್ಯಂತ್ರ ಪ್ರಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರ ಪಾತ್ರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಪ್ರಕರಣದ ಎಸ್‌ಐಟಿ (SIT) ಮಧ್ಯಂತರ ವರದಿಯನ್ನು ಸರ್ಕಾರ ತಕ್ಷಣವೇ ಬಹಿರಂಗಪಡಿಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

Out Look Fashion

ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಪ್ರಮುಖರಾದ ಚಕ್ರವರ್ತಿ ಸೂಲಿಬೆಲೆ (Chakravarti Sulibele), ವಸಂತ್ ಗಿಳಿಯಾರ್, ವಿಕಾಸ್ ಪುತ್ತೂರು ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

Jaya Refrigeration and Air Condition

ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಆರಂಭದಲ್ಲಿ ಇದೊಂದು ಷಡ್ಯಂತ್ರ ಎಂದು ನಾವು ಧ್ವನಿ ಎತ್ತಿದಾಗ ನಮ್ಮ ಚಾರಿತ್ರ್ಯ ಹನನಕ್ಕೆ ಯತ್ನಿಸಲಾಯಿತು. ಈಗ ಚಿನ್ನಯ್ಯ ತನಗೆ ದುಡ್ಡಿನ ಆಮಿಷ ಒಡ್ಡಿದ್ದರಿಂದ ಹೀಗೆ ಮಾಡಿದೆ ಎಂದು ಕೋರ್ಟ್ ಮುಂದೆ ಹೇಳಿದ್ದಾನೆ. ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಈ ತನಿಖೆಗೆ ವ್ಯಯಿಸಲಾಗಿದೆ. ಇದು ಕೇವಲ ಸರ್ಕಾರಕ್ಕೆ ಮಾಡಿದ ಮೋಸವಲ್ಲ, ರಾಜ್ಯದ 7 ಕೋಟಿ ಜನರಿಗೆ ಮಾಡಿದ ದ್ರೋಹ ಎಂದು ಆಕ್ರೋಶ ಹೊರಹಾಕಿದರು.ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರ ಜೊತೆ ನಾನು ಮಾತನಾಡಿದ್ದೇನೆ. ಅವರು ಚಿನ್ನಯ್ಯನ ಜೊತೆ ಮಾತನಾಡದಂತೆ ನನಗೆ ಸೂಚಿಸಿದ್ದರು ಎಂದು ಪ್ರಕಾಶ್ ರಾಜ್‌ ಅವರೇ ಹೇಳಿದ್ದಾರೆ. ಸಾಕ್ಷಿಯಾಗಿದ್ದ ಚಿನ್ನಯ್ಯನ ಜೊತೆ ಮಾತನಾಡದಂತೆ ಹೇಳಲು ಹೇಗೆ ಸಾಧ್ಯ? ಪ್ರಕಾಶ್ ರಾಜ್ ಅವರ ಈ ಹೇಳಿಕೆಯಿಂದ ಹೊಸ ಅನುಮಾನ ವ್ಯಕ್ತವಾಗಿದೆ. ಎಸ್‌ಐಟಿ ಮಧ್ಯಂತರ ವರದಿಯಲ್ಲಿ ಪ್ರಕಾಶ್ ರಾಜ್ ಫೋನ್ ಕರೆಗಳ ವಿವರ ಉಲ್ಲೇಖವಾಗಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಸೂಲಿಬೆಲೆ ಪ್ರಶ್ನಿಸಿದರು.