



ಬೆಂಗಳೂರು: ಚಿನ್ನಯ್ಯನ ಜೊತೆಗೆ ಮಾತನಾಡಿದ್ದು ನಿಜ, ಆತ ನನ್ನೊಂದಿಗೆ ತಮಿಳಿನಲ್ಲಿ ಮಾತನಾಡಿದ್ದ ಎಂದು ನಟ ಪ್ರಕಾಶ್ ರಾಜ್ ಒಪ್ಪಿಕೊಂಡರು.


ಬೆಂಗಳೂರಿನ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ತನ್ನ ಹೆಸರು ತಳುಕು ವಿಚಾರಕ್ಕೆ ಸ್ಪಷ್ಟನೆ ನೀಡಿದರು.

ಕೋರ್ಟ್ ನಲ್ಲಿ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ಗಿರೀಶ್ ಮಟ್ಟಣ್ಣನವರ್ ಹೇಳಿದ ರೀತಿಯಲ್ಲಿ ಕೇಳಿದ್ರೆ ನಾನು ನಿನ್ನ ಅಪ್ಪಿಕೊಳ್ತಿನಿ ಅಂದಿದ್ದೆ ಅಂತ ಹೇಳಿದ್ದಾನೆ. ಕೇರಳದಿಂದ ಹಣ ಬಂದಿದೆ ಅಂತಲೂ ಹೇಳಿ, ನನ್ನ ಹೆಸರು ಉಲ್ಲೇಖ ಮಾಡಿದ್ದಾನೆ. ಆದ್ರೆ ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋಗಿಲ್ಲ, ಗಿರೀಶ್ ಮಟ್ಟನವರ್ ಅವರನ್ನ ಭೇಟಿಯಾಗಿಲ್ಲ ಎಂದು ತಿಳಿಸಿದರು.ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹಾಕಿದ್ದಾರೆ ಅಂತಾ ಮಾತುಗಳು ಕೇಳಿಬಂದವು. ನಾನು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಎಸ್‌ಐಟಿ ರಚನೆಗೆ ಕೇಳಿದ್ದೆ. ಈ ಟೈಮಲ್ಲಿ ಒಬ್ಬ ವ್ಯಕ್ತಿ ಕರೆ ಮಾಡಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾತಾಡಬೇಕು ಅಂದ. ನನ್ನ ಜೊತೆಗೆ ತಮಿಳಿನಲ್ಲಿ ಮಾತಾಡಿದ, ಮೊಹಂತಿ ಸರ್ ಗೆ ಕರೆ ಮಾಡಿ ಆ ವಿಚಾರವನ್ನ ಹೇಳಿದ್ದೇನೆ. ಚಿನ್ನಯ್ಯ ಮಂಡ್ಯದವನು ಅಂತಾ ಗೊತ್ತು, ಬಟ್ ಇವನು ತಮಿಳಿನಲ್ಲಿ ಮಾತಾಡಿದ್ದಾನೆ ಎಂದು ಸ್ಪಷ್ಟಪಡಿಸಿದರು.
