



ಮಂಗಳೂರು, ಜೂನ್ 17: ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹೆಸರಾಗಿರುವ ಕಾರ್ತಿಕೇಯ ಫಿಸಿಯೋಥೆರಪಿ ಕ್ಲಿನಿಕ್ ತನ್ನ ಅಧಿಕೃತ ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಿದ್ದು, ಇದೀಗ ರೋಗಿಗಳಿಗೆ ಆನ್‌ಲೈನ್ ಮೂಲಕ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ.


“Move Better. Live Stronger.” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್, ನೂತನ ವೆಬ್‌ಸೈಟ್ ಮೂಲಕ ಅಪಾಯಿಂಟ್‌ಮೆಂಟ್ ಬುಕ್ಕಿಂಗ್, ಚಿಕಿತ್ಸಾ ಸೇವೆಗಳ ಮಾಹಿತಿ, ತಜ್ಞರ ಮಾರ್ಗದರ್ಶನ ಹಾಗೂ ವಿವಿಧ ಫಿಸಿಯೋಥೆರಪಿ ಚಿಕಿತ್ಸೆಗಳ ವಿವರಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಿದೆ.

ಕ್ಲಿನಿಕ್‌ನ ವೆಬ್‌ಸೈಟ್ karthikeyaphysio.in ಮೂಲಕ ರೋಗಿಗಳು ಯಾವುದೇ ಸಮಯದಲ್ಲಿ ಸೇವೆಗಳ ಕುರಿತು ಮಾಹಿತಿ ಪಡೆಯಬಹುದಾಗಿದ್ದು, ನೇರವಾಗಿ ಚಿಕಿತ್ಸೆಗೆ ಸಮಯ ಕಾಯ್ದಿರಿಸಬಹುದಾಗಿದೆ. ನೋವು ನಿವಾರಣೆ (Pain Relief), ಪುನರ್ವಸತಿ ಚಿಕಿತ್ಸೆ (Rehabilitation) ಹಾಗೂ ಕ್ರೀಡಾ ಗಾಯಗಳ ಚಿಕಿತ್ಸೆ (Sports Injury) ಸೇರಿದಂತೆ ಹಲವು ವಿಶೇಷ ಸೇವೆಗಳು ವೆಬ್‌ಸೈಟ್‌ನಲ್ಲಿ ಲಭ್ಯವಿವೆ.
ಮಂಗಳೂರು, ಬಿ.ಸಿ.ರೋಡ್ ಹಾಗೂ ಪೆರ್ಲಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ತಿಕೇಯ ಫಿಸಿಯೋಥೆರಪಿ ಕ್ಲಿನಿಕ್, ತಜ್ಞರ ಆರೈಕೆ, ಉತ್ತಮ ಫಲಿತಾಂಶ ಹಾಗೂ ದೀರ್ಘಕಾಲಿಕ ಚೇತರಿಕೆಗೆ ಒತ್ತು ನೀಡುತ್ತಿದ್ದು, ನೂತನ ವೆಬ್‌ಸೈಟ್ ಮೂಲಕ ರೋಗಿಗಳಿಗೆ ಮತ್ತಷ್ಟು ಸುಲಭ ಮತ್ತು ವೇಗದ ಸೇವೆ ನೀಡುವ ಗುರಿ ಹೊಂದಿದೆ.
