Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಂಗಳೂರು: ರಾಜ್ಯದ ಸಿಎಂ ಆದಮೇಲಾದ್ರೂ ಬ್ಲೂಫಿಲ್ಮ್‌ ಮಾಡೋದು, ಪೋಸ್ಟರ್‌ ಅಂಟಿಸೋದು ಬಿಡ್ತಾರೆ ಅಂದುಕೊಂಡಿದ್ದೆ. ಆ ಖಯಾಲಿ ಇನ್ನೂ ಹೋಗಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಲೇವಡಿ ಮಾಡಿದರು.

Out Look Fashion

ಬಿಡದಿಯಲ್ಲಿ ಕುಮಾರಸ್ವಾಮಿ ಮತ್ತು ಕುಟುಂಬದ ವಿರುದ್ದ ಪೋಸ್ಟರ್ ಅಂಟಿಸಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. 

Jaya Refrigeration and Air Condition

ರಾಜ್ಯದ ಸಿಎಂ ಆದಮೇಲಾದ್ರೂ ಬ್ಲೂಫಿಲ್ಮ್‌ ಮಾಡೋದು, ಪೋಸ್ಟರ್‌ ಅಂಟಿಸೋದು ಬಿಡ್ತಾರೆ ಅಂದುಕೊಂಡಿದ್ದೆ. ಆ ಖಯಾಲಿ ಇನ್ನೂ ಡಿಕೆ ಶಿವಕುಮಾರ್‌ಗೆ ಹೋಗಿಲ್ಲ. ಪೋಸ್ಟರ್ ಅಂಟಿಸಿ ಪ್ರಚಾರ ಮಾಡೋದಾ? ನನ್ನದು ಬಿಡಿ, ನನ್ನ ಹೆಂಡತಿಯದ್ದೂ ಫೋಟೋ ಹಾಕಿದ್ದಾರೆ. 100 ಎಕರೆ ಅಂತ ಪೋಸ್ಟರ್ ಅಂತ ನಂದು ನಿಖಿಲ್‌ ಫೋಟೋ ಹಾಕಿದ್ದಾರೆ. 46 ಎಕರೆ 40 ವರ್ಷದ ಹಿಂದೆ ಕಷ್ಟ ಪಟ್ಟು ಖರೀದಿ ಮಾಡಿರೋ ಜಮೀನು. ಅದು ಬಿಟ್ಟು ನನ್ನ ಹೆಸರಿನಲ್ಲಿ ಯಾವ ಜಮೀನು ಇದೆ. 100 ಎಕರೆ ಅಂತ ಪೋಸ್ಟರ್ ಹಾಕಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ತಗೊಂಡಿದ್ದಾರೆ. ಅದು ಖರೀದಿ ಮಾಡಿರೋದು. ಖರೀದಿ ಮಾಡಿರೋದನ್ನ ಯಾವನೋ ಹೆಸರಿನಲ್ಲಿ ಪೋಸ್ಟರ್ ಹಾಕಿ ಕೊಡಿ ಅಂದರೆ ಹೇಗೆ? ಅಂತ ಪ್ರಶ್ನಿಸಿದರು.ಬೆನ್ನಗಾನಹಳ್ಳಿಯಲ್ಲಿ ಸತ್ತೋದವರ ಹೆಬ್ಬಟ್ಟು ತೋರಿಸಿ ಜಮೀನು ತಗೊಂಡ ವ್ಯಕ್ತಿ ಈಗ ಅವರ ಬೆಂಬಲಿಗರಿಗೆ ಹೇಳಿ ಪೋಸ್ಟರ್ ಹಾಕಿಸಿದ್ದಾರೆ. ಪೋಸ್ಟರ್ ಹಾಕಿದ್ರೆ ಜನ ನಂಬುತ್ತಾರಾ? ಸಿಎಂ ಆದಾಗಾದ್ರೂ ಒಂದು ಸ್ಟ್ಯಾಂಡರ್ಡ್ ಬೇಡವಾ? ಸ್ಟ್ಯಾಂಡರ್ಡ್ ಇಲ್ಲದೇ ಈ ರೀತಿಯ ನಡವಳಿಕೆ, ರಾಜ್ಯ ಯಾವ ರೀತಿ ಹೊಗುತ್ತೆ ಅನ್ನೋದನ್ನ ಯೋಚನೆ ಮಾಡಬೇಕು ಎಂದು ಕುಟುಕಿದರು.