ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡಿ ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ಬಂಧಿಸಿ 1,56,000 ಮೌಲ್ಯದ,3 ಕೆಜಿ 138 ಗ್ರಾಂ ಗಾಂಜಾ ಮಾದಕ ವಸ್ತು ವಶಪಡಿಸಿಕೊಂಡ ಮಂಗಳೂರು ನಗರದ ಕಾವೂರು ಪೊಲೀಸರು.

ದಿನಾಂಕ:13-05-2026 ರಂದು ಕಾವೂರು ಠಾಣಾ ವ್ಯಾಪ್ತಿಯ ಮೇರಿಹಿಲ್ ಹ್ಯಾಲಿಪ್ಯಾಡ್ ಮೈದಾನದ ಬಳಿ ಮೇರಿಹಿಲ್ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಎಡ ಬದಿಯಲ್ಲಿ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿತ ಇರ್ಷಾದ್ @ಇರ್ಷಾ ಪ್ರಾಯ: 26 ವರ್ಷ ತಂದೆ: ದಿ|| ಕೆ.ಕೆ. ಇಕ್ಬಾಲ್ ವಾಸ: 15-110/44 ಹಿಲರಿಯ ನಗರ ಮುಕ್ಕಚೇರಿ ಉಳ್ಳಾಲ ಮಂಗಳೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಸುಮಾರು 3 ಕೆಜಿ 138 ಗ್ರಾಮ್ ತೂಕದ ಗಾಂಜಾ ಎಂಬ ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್, ಸ್ಕೂಟರ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ: 74/2026 ಕಲಂ: 8(c), 20(b)(ii)(B) ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪಣಂಬೂರು ACP ತಂಡ ಹಾಗೂ ಕಾವೂರು ಠಾಣೆಯ ತಂಡ ದಿಂದ ಕಾರ್ಯಾಚರಣೆ ನಡೆಸಲಾಗಿದೆ.

ಆರೋಪಿತನಮೇಲೆ ಈ ಕೆಳಗಿನಂತೆ ಪ್ರಕರಣಗಳು ದಾಖಲಾಗಿರುತ್ತದೆ
1) ಉಳ್ಳಾಲ ಪೊಲೀಸ್ ಠಾಣಾ ಅ. ಕ್ರ 106/2019 ಕಲಂ: 307 ಮತ್ತು Arms Act.
2) ಮಂಗಳೂರು CSP PS CRIME NO-06/2024 8 (c),20(b) NDPS Act.