Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಂಗಳೂರು: ನಗರದ ಹೊರವಲಯದ ತಾತಗುಣಿ ಬಳಿ ಜಿಲೆಟಿನ್ ಕಡ್ಡಿಗಳು(Gelatin Sticks) ಪತ್ತೆಯಾಗಿರುವುದು ಈಗ ತನಿಖಾ ತಂಡಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಯು ಕೇವಲ ಕಾಕತಾಳೀಯವೇ ಅಥವಾ ಇದರ ಹಿಂದೆ ಯಾವುದಾದರೂ ಉದ್ದೇಶಪೂರ್ವಕ ಸಂಚು ಅಡಗಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು (Police) ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Out Look Fashion

ಬೆದರಿಕೆ ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಪೊಲೀಸರ ವಶದಲ್ಲಿರುವ ಲೋಹಿತ್ (Lohith) ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆತನ ಟ್ರಾವೆಲ್ ಹಿಸ್ಟರಿ (Travel History) ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಬೆಂಗಳೂರಿಗೆ ಭೇಟಿ ನೀಡುವ ಕೇವಲ ಒಂದು ದಿನದ (ಮೇ 9) ಮೊದಲು ಲೋಹಿತ್ ತಮಿಳುನಾಡಿಗೆ (Tamil Nadu) ಹೋಗಿ ಬಂದಿರುವುದು ಪತ್ತೆಯಾಗಿದೆ.

Jaya Refrigeration and Air Condition

ತಮಿಳುನಾಡಿನಲ್ಲಿ ಜಿಲೆಟಿನ್ ತಯಾರಿಕಾ ಘಟಕಗಳು ಮತ್ತು ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆತ ಅಲ್ಲಿಗೆ ಭೇಟಿ ನೀಡಿದ್ದು ಯಾಕೆ? ಸ್ಫೋಟಕಗಳನ್ನು ತರಲು ಹೋಗಿದ್ದನೇ? ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಪ್ರಸ್ತುತ ತಮಿಳುನಾಡಿನ ಸ್ಫೋಟಕ ಮಾರಾಟಗಾರರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.