ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ವಿಮಾನ ಮತ್ತು ವಾಹನಗಳ ನಡುವಿನ ಅಪಘಾತ ತಪ್ಪಿಸಲು ಎಐ ಆಧಾರಿತ ಸ್ಮಾರ್ಟ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.

ವಿಮಾನ ನಿಲ್ದಾಣದ ವಾಯುಯಾನ ಪ್ರದೇಶದಲ್ಲಿ ಕಾರ್ಯಾಚರಣೆ ಸುರಕ್ಷತೆ ಮತ್ತು ನಿಯಂತ್ರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು ಸಮಗ್ರವಾದ `ಸ್ಮಾರ್ಟ್ ಏರ್‌ಸೈಡ್ ಸುರಕ್ಷತಾ ವ್ಯವಸ್ಥೆ’ಯನ್ನು ಪರಿಚಯಿಸಿದೆ. 

ವಿಮಾನ ನಿಲ್ದಾಣದ ಅತ್ಯಂತ ಮಹತ್ವದ ಪ್ರದೇಶವಾದ ಏರ್‌ಸೈಡ್ ವಲಯಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸುಧಾರಿತ ತಾಂತ್ರಿಕ ನಿಯಂತ್ರಣವನ್ನು ಸಾಧಿಸಲು ಈ ವ್ಯವಸ್ಥೆಯು ಮಹತ್ವದ ಹೆಜ್ಜೆಯಾಗಿದೆ. ವಿಮಾನಗಳು ಮತ್ತು ನೆಲದ ಮೇಲಿನ ವಾಹನಗಳ ಸಂಚಾರ ಸಂಧಿಸುವ ಕ್ರಾಸ್ ಸರ್ವಿಸ್ ರಸ್ತೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಕೃತಕ ಬುದ್ಧಿಮತ್ತೆ ಆಧಾರಿತ ಕಂಪ್ಯೂಟರ್ ವಿಷನ್, ಇಂಟೆಲಿಜೆಂಟ್ ಆಟೋಮೇಷನ್ ಮತ್ತು ಕೇಂದ್ರೀಕೃತ ನಿಯಂತ್ರಣವನ್ನು ಒಳಗೊಂಡಿದ್ದು, ಸುರಕ್ಷಿತ ಸಂಚಾರ ನಿರ್ವಹಣೆ, ಕಾರ್ಯಕ್ಷಮತೆಯ ಹೆಚ್ಚಳ ಮತ್ತು ನಿಖರ ಕಾರ್ಯಾಚರಣೆಯನ್ನು ಸಾಧ್ಯವಾಗಿಸುತ್ತದೆ