


ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಶಾಲೆಗಳ ‘ಪಿ.ಎಂ ಪೋಷಣ್’ (ಬಿಸಿಯೂಟ) ಯೋಜನೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.


ಹೊಸ ಕಾರು ಅಥವಾ ಬೈಕ್ ಖರೀದಿಸಿದಾಗ ಶೋರೂಮ್‌ನವರು ನೀಡುವ ಕೀಲಿಯ ಕೈಗುಚ್ಛದಲ್ಲಿ ಒಂದು ಸಣ್ಣ ಮೆಟಲ್ ಅಥವಾ ಅಲ್ಯೂಮಿನಿಯಂ ತುಂಡು ಇರುವುದನ್ನು ಬಹುತೇಕರು ಗಮನಿಸಿರುತ್ತಾರೆ. ಹೆಚ್ಚಿನವರು ಅದನ್ನು ಸಾಮಾನ್ಯ ಟ್ಯಾಗ್ ಎಂದುಕೊಂಡು ಎಸೆದುಬಿಡುತ್ತಾರೆ. ಆದರೆ ವಾಸ್ತವದಲ್ಲಿ ಈ ಪುಟ್ಟ ಮೆಟಲ್ ಟ್ಯಾಗ್ ನಿಮ್ಮ ವಾಹನದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
ಈ ಸಣ್ಣ ಲೋಹದ ತುಂಡಿನ ಮೇಲೆ ಕೆಲವು ಅಂಕಿಗಳನ್ನು ಕೆತ್ತಲಾಗಿರುತ್ತದೆ. ಇದನ್ನು ತಾಂತ್ರಿಕವಾಗಿ ‘ಕೀ ಕೋಡ್’ (Key Code) ಎಂದು ಕರೆಯಲಾಗುತ್ತದೆ. ಈ ಕೋಡ್ ನಿಮ್ಮ ವಾಹನದ ಕೀಲಿಗೆ ಸಂಬಂಧಿಸಿದ ವಿಶಿಷ್ಟ ಗುರುತು ಆಗಿದ್ದು, ಕೀಲಿಯ ಡಿಜಿಟಲ್ ಫಿಂಗರ್‌ಪ್ರಿಂಟ್‌ನಂತೆ ಕಾರ್ಯನಿರ್ವಹಿಸುತ್ತದೆ.
ಈ ಕೋಡ್ ಯಾವಾಗ ಉಪಯೋಗಕ್ಕೆ ಬರುತ್ತದೆ?
** ಒಂದು ವೇಳೆ ವಾಹನದ ಎರಡೂ ಕೀಲಿಗಳು ಕಳೆದುಹೋದರೆ ಹೊಸ ಕೀಲಿ ಮಾಡಿಸುವುದು ಸಾಮಾನ್ಯವಾಗಿ ಕಷ್ಟಕರ. ಆದರೆ ಈ ಮೆಟಲ್ ಟ್ಯಾಗ್ ಮೇಲಿರುವ ಕೋಡ್ ಅನ್ನು ಕಂಪನಿಗೆ ನೀಡಿದರೆ, ಅವರು ಅದೇ ರೀತಿಯ ಹೊಸ ಕೀಲಿಯನ್ನು ಸುಲಭವಾಗಿ ತಯಾರಿಸಿಕೊಡುತ್ತಾರೆ.*
** ಈ ಕೋಡ್ ಇಲ್ಲದಿದ್ದರೆ ಕೀಲಿ ಕಳೆದುಹೋದ ಸಂದರ್ಭದಲ್ಲಿ ಸಂಪೂರ್ಣ ಲಾಕ್ ಸೆಟ್ ಬದಲಿಸಬೇಕಾಗುತ್ತದೆ. ಇದರಿಂದ ಸಾವಿರಾರು ರೂಪಾಯಿ ವೆಚ್ಚವಾಗಬಹುದು. ಆದರೆ ಕೀ ಕೋಡ್ ಇದ್ದರೆ ಕೇವಲ ಹೊಸ ಕೀಲಿಯನ್ನು ಮಾತ್ರ ಮರುಸೃಷ್ಟಿಸಬಹುದು.*
** ಇಂದಿನ ಆಧುನಿಕ ಕಾರುಗಳಲ್ಲಿ ಸ್ಮಾರ್ಟ್ ಕೀ ಅಥವಾ ಪುಶ್ ಬಟನ್ ಸ್ಟಾರ್ಟ್ ವ್ಯವಸ್ಥೆ ಇದ್ದರೂ ಅವುಗಳ ಒಳಗೆ ಒಂದು ಸಣ್ಣ ಎಮರ್ಜೆನ್ಸಿ ಕೀ ಇರುತ್ತದೆ. ಅದನ್ನು ಮರುತಯಾರಿಸಲು ಕೂಡ ಈ ಕೋಡ್ ಅತ್ಯಗತ್ಯವಾಗಿರುತ್ತದೆ.*
