Tamanvi Silk
Darbe Salon
Mahalingeshwara Car Air Condition

ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಖಾಸಗಿ ಕಂಪೆನಿಯ ಉದ್ಯೋಗಿ ಯುವಕನೊಬ್ಬ ಹಠಾತ್ ಕುಸಿದುಬಿದ್ದು ಸಾವನ್ನಪ್ಪಿದ್ದ ಘಟನೆ ಉಳ್ಳೂರು ಗ್ರಾಮದಲ್ಲಿ ನಡೆದಿದೆ.

Out Look Fashion

ಉಳ್ಳೂರು 11 ಗ್ರಾಮದ ಹಾಡಿಮನೆ ನಿವಾಸಿ ಶಶಿಧರ್ (25) ಮೃತ ದುರ್ದೈವಿ. ಬಿಬಿಎ ಪದವೀಧರರಾಗಿರುವ ಇವರು ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಪ್ರಸ್ತುತ 4 ವರ್ಷಗಳಿಂದ Work from Home ನಲ್ಲಿದ್ದು ತನ್ನ ತಾಯಿ ಮನೆಯಾದ ಹರ್ಕೂರಿನ ಕಟ್ಟಿನಮಕ್ಕಿಯಲ್ಲಿ ವಾಸ್ತವ್ಯ ಇದ್ದು ದಿನಾಂಕ 11.03.2026 ರಂದು ಮನೆಯ ಸಿಟೌಟ್‌ನಲ್ಲಿ ಕುಳಿತಿದ್ದಾಗಹಠಾತ್‌ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರ ಮನೆಯವರು ಆರೈಕೆ ಮಾಡುವಾಗ ತನಗೆ ಉಸಿರು ಕಟ್ಟುತ್ತಿದೆ ಎಂದು ಎದೆ ಹಿಡಿದುಕೊಂಡು ನರಳಾಡಿದ್ದು ಕೂಡಲೇ ಚಿಕಿತ್ಸೆ ಬಗ್ಗೆ ಕುಂದಾಪುರ ವಿನಯ ಆಸ್ಪತ್ರೆ ಕರೆದುಕೊಂಡು ಹೋಗಿದ್ದು ವೈಧ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು ರಾತ್ರಿ 8:25 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಯು.ಡಿ.ಆರ್‌ ಕ್ರಮಾಂಕ 05/2026 ಕಲಂ:194 ಬಿಎನ್ಎಸ್ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.

Jaya Refrigeration and Air Condition