ಪುತ್ತೂರು: ಇರಾನ್ ಇಸ್ರೇಲ್ ಅಮೆರಿಕಾ ಸಂಘರ್ಷದಿಂದ ಉಂಟಾದ ಜಾಗತಿಕ ಎಲ್‌ಪಿಜಿ (ಅಡುಗೆ ಅನಿಲ) ಪೂರೈಕೆಯಲ್ಲಿ ಅಡಚಣೆಯಿಂದ ಪುತ್ತೂರಿನಲ್ಲಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ತೀವ್ರವಾಗಿದೆ. ಗಾಸಿಪ್ ಗಳನ್ನು ನಂಬಿ ಮನೆಗಳಿಗೆ ಸಿಲಿಂಡ‌ರ್ ತರಲು ಜನರು ಏಜೆನ್ಸಿಗಳ ಬಳಿ ಮುಗಿಬಿದ್ದು. ದೀರ್ಘ ಸರತಿ ಸಾಲುಗಳು ಕಂಡುಬಂದಿವೆ. ವಾಹನಗಳ ಸಾಲು ಕಿಮೀ ಗಟ್ಟಲೆ ನಿಂತಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿದ್ದರಿಂದ ಹಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಮೀನಿನ ತವಾ ಐಟಂಗಳನ್ನು ಬಂದ್ ಮಾಡಿವೆ. ದೋಸೆ ಚಪಾತಿಯೂ ನಿಲ್ಲುವ ಹಂತಕ್ಕೆ ಬಂದಿದೆ. ಕೆಲವು ಹೋಟೆಲ್ ಮಾಲೀಕರು ಕಟ್ಟಿಗೆ ತರಿಸಿ ಸ್ಟಾಕ್ ಹಾಕುವ ಪ್ರಯತ್ನದಲ್ಲಿದ್ದಾರೆ.

ಗ್ಯಾಸ್‌ ಸಿಲಿಂಡರ್‌ಗಳ ಕೊರತೆ ತೀವ್ರವಾದ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ನಡೆಯಬೇಕಾಗಿದ್ದ ಫುಡ್ ಫೆಸ್ಟ್ ಕಾರ್ಯಕ್ರಮಗಳು ರದ್ದಾಗಿವೆ.

ಕೋಳಿ ಫಾರಂಗಳಲ್ಲಿ (ಪೌಲ್ಟಿ ಫಾರ್ಮ್‌ಗಳಲ್ಲಿ) ವಿದ್ ಸ್ಕಿನ್ ಕೋಳಿಗಳಿಗೆ ಗ್ಯಾಸ್ ಉಪಯೋಗವಿರುವುದರಿಂದ ವಿದ್ ಸ್ಕಿನ್ ಮಾಂಸ ಮಾರಾಟ ಸ್ಥಗಿತಗೊಂಡಿದೆ.