


ಮಂಗಳೂರು: ದಕ್ಷಿಣ ಕನ್ನಡ ಪೊಲೀಸ್ ಘಟಕದಲ್ಲಿ ನೂತನವಾಗಿ ಕಾರ್ಯಾರಂಭಗೊಳ್ಳಲಿರುವ ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿ ಪ್ರದೇಶಗಳನ್ನು ಸಂಯೋಜಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಪ್ರಸ್ತಾವನೆಯ ಪ್ರಕಾರ ಸಜಿಪನಡು ಪೊಲೀಸ್ ಠಾಣೆ ಮತ್ತು ಮಾಣಿ ಪೊಲೀಸ್ ಠಾಣೆ ಎಂಬ ಎರಡು ಹೊಸ ಠಾಣೆಗಳು ಸ್ಥಾಪನೆಗೊಳ್ಳಲಿದ್ದು, ಅವುಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಪಟ್ಟಿಯನ್ನು ಕೂಡ ನಿಗದಿಪಡಿಸಲಾಗಿದೆ.


ಸಜಿಪನಡು ಪೊಲೀಸ್ ಠಾಣೆ ವ್ಯಾಪ್ತಿ:
ಮಂಚಿ, 2, ಸಜಿಪನಡು, ಸಜಿಪಪಡು, ಚೇಳೂರು, ಬೋಳಂತೂರು, ವೀರಕಂಬ, ಕೊಳ್ಳಾಡು, ಸಾಲೆತ್ತೂರು, ಸಜಿಪಮೂಡ ಹಾಗೂ ಸಜಿಪ ಮುನ್ನೂರು ಗ್ರಾಮಗಳು ಸಜಿಪನಡು ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡಲಿವೆ.
ಮಾಣಿ ಪೊಲೀಸ್ ಠಾಣೆ ವ್ಯಾಪ್ತಿ:
ಶಂಭೂರು, ಬರಿಮಾರು, ಕಡೆಶಿವಾಲಯ, ನೆಟ್ಲಮಡೂರು, ಅನಂತಾಡಿ, ಇಡಿದು, ಮಾಣಿ, ಪೆರಾಜೆ, ಬಾಳ್ತಿಲ, ಗೋಲ್ತಮಜಲು, ಕೊಡಿಪ್ಪಾಡಿ, ಕಬಕ ಹಾಗೂ ಕೆದಿಲ ಗ್ರಾಮಗಳನ್ನು ಮಾಣಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಕುರಿತು ಅಂತಿಮ ನಿರ್ಧಾರ ಸರ್ಕಾರದ ಅನುಮೋದನೆ ಬಳಿಕ ಪ್ರಕಟವಾಗಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
