Akshaya Sharadhotsava
Darbe Salon
Mahalingeshwara Car Air Condition
New Dot Dress Mart

ನೆರಿಯ : ಅ 07 ನೆರಿಯ ಗ್ರಾಮದ ಹರೀಶ್ ವಿ. ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಹಾನಿಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಎಂಬಲ್ಲಿ ನಡೆದಿದೆ.

Out Look Fashion

ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ತಾತ್ಕಾಲಿಕವಾಗಿ ವಾಸ್ತವ್ಯವಿರಲು ಮನೆಯ ವ್ಯವಸ್ಥೆಯನ್ನು ಮತ್ತು ಮುಂದಿನ ಮನೆ ನಿರ್ಮಾಣದ ಕುರಿತು ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸಿದರು.

Jaya Refrigeration and Air Condition

ಇದೇ ಸಂದರ್ಭದಲ್ಲಿ ವೈಯಕ್ತಿಕ ಧನಸಹಾಯವನ್ನು ನೀಡಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಬಿ‌‌.ಜೆ.ಪಿ ಮಹಾಶಕ್ತಿ ಕೇಂದ್ರ ಪ್ರಮುಖರಾದ ಬಾಬು ಗೌಡ ಪರ್ಪಳ, ಶಕ್ತಿ ಕೇಂದ್ರ ಪ್ರಮುಖರರಾದ ವಿಶ್ವನಾಥ ಅಣಿಯೂರು,ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತಿ, ಉಪಾಧ್ಯಕ್ಷರಾದ ಸಜಿತ, ಸದಸ್ಯರಾದ ಕುಶಲ, ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಆರ್,ಎಸ್ ಎಸ್ ಪ್ರಮುಖರಾದ ಶಿವಪ್ರಸಾದ್ ಸುರ್ಯ, ಸುದರ್ಶನ್ ಕನ್ಯಾಡಿ, ರಾಜೇಶ್ ತೋಟತ್ತಾಡಿ, ಅಕ್ಷಯ್ ಅಣಿಯೂರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.