




ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಸಹಜ ಸಾವುಗಳ ಪ್ರಕರಣದ ತನಿಖೆ ನಡೆಸಲು ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯವನ್ನು ಹೊರಗೆ ತರುವಂತೆ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮವು ಕರುನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ಅತ್ಯಂತ ಮಹತ್ವವಾದ ಸ್ಥಾನವನ್ನು ಹೊಂದಿರುವ೦ತಹ ಸತ್ಯ- ಧರ್ಮ- ನ್ಯಾಯ- ಸೇವಾ ತತ್ವಗಳೊಂದಿಗೆ ಅಪಾರ ಭಕ್ತರ ನಂಬಿಕೆಯ ನೆಲೆಯಾಗಿರುವುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಇತ್ತೀಚೆಗೆ ವ್ಯಕ್ತಿಯೊಬ್ಬರು ಧರ್ಮಸ್ಥಳದಲ್ಲಿ ಹಲವಾರು ಮಹಿಳೆಯರ ಶವವನ್ನು ಮಣ್ಣು ಮಾಡಿದ್ದೇನೆ ಎಂದು, ಆದರೀಗ ಪಾಪ ಪ್ರಜ್ಞೆ ಕಾಡುತೀದೆ ಎಂದು, ತಾನು ಮಣ್ಣು ಮಾಡಿದ ಸ್ಥಳವನ್ನು ತೋರಿಸುತ್ತೇನೆ೦ದು ಮು೦ದೆ ಬ೦ದಿದ್ದಾರೆ. ಅದರ ಅನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ 211(ಎ) ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿರುತ್ತಾರೆ.

ಈ ಸಂಬಂಧವಾಗಿ ಕರ್ನಾಟಕ ಸರ್ಕಾರವು 4 ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಐಪಿಎಸ್ ಪ್ರಣವ ಮೋಹಂತಿ ರವರ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ವಾಗತಿಸುತ್ತದೆ. ಇದೇ ಸ೦ದರ್ಭದಲ್ಲಿ ಧರ್ಮಸ್ಥಳದಲ್ಲಿ ನಡೆದ ಎನ್ನಲಾದ ಅತ್ಯಾಚಾರ ಹತ್ಯೆ ದೌರ್ಜನ್ಯ ಪ್ರಕರಣಗಳನ್ನು ಹಾಗೂ ಅಸಹಜ ಸಾವಿನ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ನೀಡುವುದು ಎಸ್ ಐ ಟಿ ರಚನೆಯ ಉದ್ದೇಶ ಎ೦ದು ಭಾವಿಸಲಾಗಿದೆ.
ಸದರಿ ವಿಷಯದಲ್ಲಿ ಧರ್ಮಸ್ಥಳ ಕ್ಷೇತ್ರದ ಪವಿತ್ರತೆ ಮತ್ತು ನಂಬಿಕೆಗೆ ಯಾವುದೇ ಕು೦ದು ಉ೦ಟಾಗದಂತೆ ಎಸ್ ಐ ಟಿ ಯು ತನ್ನ ಕಾರ್ಯವನ್ನು ಸತ್ಯ ನ್ಯಾಯಗಳೆರಡರ ಪರವಾಗಿ ಕಾರ್ಯನಿರ್ವಹಿಸಿ ಧರ್ಮಸ್ಥಳ ಪ್ರಕರಣದ ಸುತ್ತ ಹುಟ್ಟಿಕೊಂಡಿರುವ ಹಲವಾರು ಊಹಾಪೋಹಗಳು ಹಾಗೂ ಅನುಮಾನಗಳಿಗೆ ಸಮರ್ಪಕ ಉತ್ತರ ಕ೦ಡುಕೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.
