



ಸುಳ್ಯ : ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಗೋರಡ್ಕ ಎಂಬಲ್ಲಿ ಯಾರೋ ಕಿಡಿಗೇಡಿಗಳು ಗೋರಡ್ಕ ಮನೆಗೆ ಹೋಗುವ ರಸ್ತೆಯಲ್ಲಿ ಕುಂಬಳಕಾಯಿಯಲ್ಲಿ ವಾಮಾಚಾರ ಮಾಡಿ ರಸ್ತೆಯಲ್ಲಿ ಎಸೆದು ಹೋದ ಘಟನೆ ಜುಲೈ 19 ಶನಿವಾರದಂದು ನಡೆದಿದೆ.


ಯಾರೋ ಕಿಡಿಗೇಡಿಗಳು ರಾತ್ರೋ ರಾತ್ರಿ ಕುಂಬಳಕಾಯಿಗೆ ಲಿಂಬೆ ಊದುಬತ್ತಿ ಕುಂಕುಮ ಇಟ್ಟು ವಾಮಾಚಾರ ಮಾಡಿ ಗೊರಡ್ಕ ಮನೆಗೆ ಹೋಗುವ ದಾರಿಯಲ್ಲಿ ಎಸೆದು ಹೋಗಿದ್ದಾರೆ. ಈ ಘಟನೆಯಿಂದ ಅಕ್ಕ ಪಕ್ಕದಲ್ಲಿರುವ ಮನೆಯವರು ಆತಂಕದಲ್ಲಿದ್ದು ದಾರಿ ಮಧ್ಯೆ ಸಣ್ಣಪುಟ್ಟ ಮಕ್ಕಳು ನಡೆದಾಡಲು ಆತಂಕ ಪಡುವಂತಾಗಿದ್ದು ಸಂಬಂಧಪಟ್ಟವರು ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿ ಸಂತ್ರಸ್ಥರಾಗಿರುವ ಮನೆಯವರೆಲ್ಲರೂ ಆಗ್ರಹಿಸಿರುತ್ತಾರೆ.

