



ಬೆಂಗಳೂರು: ವಾಟ್ಸಪ್‌ಗೆ (WhatsApp Scam) ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ ಎಂದು ತೆರೆಯಲು ಹೋಗುವ ಮುನ್ನ ಎಚ್ಚರವಾಗಿರಿ. ಮದುವೆ ಆಹ್ವಾನ ಪತ್ರಿಕೆ ಬಂದಿದೆ ಎಂದು ನಂಬಿ ಫೈಲ್ ಓಪನ್ (APK File Scam) ಮಾಡಿದ ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಸುಮಾರು 9.96 ಲಕ್ಷ ರೂ. ಕಳೆದುಕೊಂಡಿದ್ದಾರೆ.


ಸೈಬರ್ ವಂಚಕರು ಜನರನ್ನು ಮೋಸಗೊಳಿಸಲು ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ವಾಟ್ಸಪ್‌ಗೆ ಬರುವ ಅಪರಿಚಿತ ಲಿಂಕ್ ಅಥವಾ ಫೈಲ್‌ಗಳನ್ನು ಕ್ಲಿಕ್ ಮಾಡಿ ಹಣ ಕಳೆದುಕೊಂಡ ಘಟನೆಗಳು ಆಗಾಗ ಕೇಳಿಬರುತ್ತಲೇ ಇವೆ. ಇದೀಗ ಅದೇ ರೀತಿಯಲ್ಲಿ ವಾಟ್ಸಪ್‌ನಲ್ಲಿ ಮದುವೆ ಆಹ್ವಾನದ ಹೆಸರಿನಲ್ಲಿ APK ಫೈಲ್ ಕಳುಹಿಸಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಸುಮಾರು 9.96 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಮೇಶ್ ಬಾಬು ಅವರಿಗೆ ಜುಲೈ 14ರಂದು ಸಂಜೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್‌ನಲ್ಲಿ ಮದುವೆ ಆಹ್ವಾನದ ಸಂದೇಶ ಬಂದಿದೆ. ಸ್ನೇಹಿತ ಅಥವಾ ಪರಿಚಿತರದ್ದಿರಬಹುದು ಎಂದು ಭಾವಿಸಿ ಅವರು ಆ ಫೈಲ್ ಅನ್ನು ಮಾಡಿದ್ದಾರೆ.
