Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಂಗಳೂರು: ಇಲ್ಲಿನ ಬಾಣಸವಾಡಿಯ ಇಂದಿರಾ ಸ್ಟ್ರೀಟ್‌ನಲ್ಲಿ 2 ವರ್ಷದ ಮಗು ಅನುಮಾನಾಸ್ಪದ ಸಾವನ್ನಪ್ಪಿದ್ದು, ಲಿವ್ ಇನ್‌ನಲ್ಲಿದ್ದ ತಂದೆ, ತಾಯಿ ಮೇಲೆ ಶಂಕೆ ವ್ಯಕ್ತವಾಗಿದೆ.

Out Look Fashion

ಲಿವ್ ಇನ್‌ನಲ್ಲಿದ್ದ ಜೇಸನ್ ಆಂಥೋನಿ ಮತ್ತು ರೋಸ್ಲಿನ್‌ಯ ಮಗಳು 2 ವರ್ಷದ ಕಾರ್ಲೆಟ್ ಡೈಸಿ ಮೃತ ಕಂದಮ್ಮ. ಮೊನ್ನೆ ಇದ್ದಕ್ಕಿದ್ದಂತೆ ಮಗುವಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಸಾವನ್ನಪ್ಪಿರೋದಾಗಿ ಪೋಷಕರು ತಿಳಿಸಿದ್ದಾರೆ.

Jaya Refrigeration and Air Condition

ಈ ಸಂಬಂಧ ಮಗುವಿನ ತಾಯಿಯ ಸ್ನೇಹಿತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವಿಗೆ ತಾಯಿ ಹೊಡೆಯುತ್ತಿದ್ದರು, ಅದನ್ನು ನಾನು ನೋಡಿದ್ದೆ. ಮಗುವಿನ ಮೈಮೇಲೆ ಕೆಲವೆಡೆ ಗಾಯದ ಗುರುತುಗಳು ಪತ್ತೆಯಾಗಿದೆ. ಹೀಗಾಗಿ ಮಗು ಸಾವಿನ ಬಗ್ಗೆ ಅನುಮಾನ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.