Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಪ್ಯಾರಿಸ್: ಫಿಫಾ ವಿಶ್ವಕಪ್‌ (FIFA World Cup 2026) ಮೂರನೇ ಟ್ರೋಫಿ ಎತ್ತಿಹಿಡಿಯುವ ಫ್ರಾನ್ಸ್‌ (France) ಕನಸು ಭಗ್ನವಾಗಿದೆ. ಮಂಗಳವಾರ ಮಧ್ಯರಾತ್ರಿ ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ ಎಟಿ & ಟಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್‌ ಸೆಮಿಫೈನಲ್‌ನಲ್ಲಿ ಸ್ಪೇನ್ (Spain) ವಿರುದ್ಧ 2-0 ಅಂತರದಿಂದ ಫ್ರಾನ್ಸ್‌ ಸೋತು 2026 ರ ಟೂರ್ನಿಯಿಂದ ಹೊರಬಿದ್ದಿತು. ಸೋಲಿನ ನಂತರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದಂತೆ ಫ್ರಾನ್ಸ್‌ನಲ್ಲಿ ಗಲಭೆಗಳು ಭುಗಿಲೆದ್ದಿವೆ.

Out Look Fashion

ಸೆಮಿಫೈನಲ್‌ ಪಂದ್ಯದಲ್ಲಿ ಸೋತು ಫ್ರಾನ್ಸ್‌ ತನ್ನ ಅಭಿಯಾನವನ್ನು ಕೊನೆಗೊಳಿಸಿತು. ಪಂದ್ಯದಲ್ಲಿ ಸಮಚಿತ್ತದಿಂದ ಆಡಿದ ಸ್ಪೇನ್ 2026 ರ FIFA ವಿಶ್ವಕಪ್ ಫೈನಲ್‌ಗೇರಿತು. ಕೈಲಿಯನ್ ಎಂಬಾಪೆಯಂತಹ (Kylian Mbappé) ಆಕ್ರಮಣಕಾರಿ ಆಟಗಾರರ ಹೊರತಾಗಿಯೂ ಸ್ಪಷ್ಟ ಅವಕಾಶಗಳನ್ನು ಸೃಷ್ಟಿಸಲು ಹೆಣಗಾಡಿದ ಡಿಡಿಯರ್ ಡೆಸ್ಚಾಂಪ್ಸ್ ತಂಡವು ನಿರಾಸೆ ಅನುಭವಿಸಿತು. ಸ್ಪೇನ್‌ ತಂಡ ಎರಡು ಗೋಲುಗಳನ್ನು ಗಳಿಸಿ 2-0 ಜಯ ಸಾಧಿಸಿತು.

Jaya Refrigeration and Air Condition

ದೇಶಕ್ಕೆ ಮೂರನೇ ವಿಶ್ವಕಪ್‌ ಕೈತಪ್ಪಿತು ಎಂದು ಆಕ್ರೋಶಭರಿತರಾದ ಫುಟ್‌ಬಾಲ್‌ ಫ್ಯಾನ್ಸ್‌ ಬೀದಿಗಿಳಿದು ಹಿಂಸಾಚಾರ ನಡೆಸಿದ್ದಾರೆ. ಫ್ರೆಂಚ್ ರಾಜಧಾನಿಯ ಕೆಲವು ಭಾಗಗಳಲ್ಲಿ ಗಲಭೆಗಳು ನಡೆದವು. ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿಹಚ್ಚಿದ್ದಾರೆ. ಈ ವೇಳೆ ಗಲಭೆ ನಿಯಂತ್ರಣಕ್ಕೆ ಮುಂದಾದ ಪೊಲೀಸರ ಜೊತೆಯೂ ಫ್ಯಾನ್ಸ್‌ ಘರ್ಷಣೆ ಮಾಡಿಕೊಂಡಿದ್ದಾರೆ. ಹಿಂಸಾಚಾರದ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.