Akshaya Sharadhotsava
Darbe Salon
Mahalingeshwara Car Air Condition
New Dot Dress Mart
ಯಾರು ಕೇಳುವರಿಲ್ಲ, ಯಾರು ಸರಿಪಡಿಸುವವರಿಲ್ಲ; ಪಡೀಲ್ ಬಸ್ ಸ್ಟ್ಯಾಂಡ್‌ಗೆ ಕಾಯಕಲ್ಪ ಯಾವಾಗ?

ಪುತ್ತೂರು–ಉಪ್ಪಿನಂಗಡಿ ರಸ್ತೆಯ ಪಡೀಲ್ ಬಸ್ ನಿಲ್ದಾಣ ಪ್ರಯಾಣಿಕರಿಗೆ ಆಶ್ರಯವಾಗಬೇಕಾದ ಸ್ಥಳವಾಗಿದ್ದರೂ, ಇಂದು ಅದು ಕಸದ ರಾಶಿ ಮತ್ತು ಗಲೀಜಿನ ತಾಣವಾಗಿ ಮಾರ್ಪಟ್ಟಿದೆ.

Out Look Fashion

ಹೊರಗಿನಿಂದ ನೋಡಲು ಸುಂದರವಾಗಿ ಕಾಣುವ ಈ ಬಸ್ ತಂಗುದಾಣದ ಒಳಭಾಗಕ್ಕೆ ಕಾಲಿಟ್ಟರೆ ಅದರ ನೈಜ ಚಿತ್ರಣವೇ ಬೇರೆ. ಹಲವು ವರ್ಷಗಳಿಂದ ಸ್ವಚ್ಛತೆ ಕಾಣದಿರುವ ಕಾರಣ ದಟ್ಟವಾಗಿ ಬೆಳೆದಿರುವ ಹುಲ್ಲು, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ತಂಬಾಕು ಪ್ಯಾಕೆಟ್‌ಗಳು, ಸಿಗರೇಟ್ ತುಂಡುಗಳು, ಖಾಲಿ ನೀರಿನ ಬಾಟಲಿಗಳು, ಹಳೆಯ ಬಟ್ಟೆಗಳು ಸೇರಿದಂತೆ ವಿವಿಧ ತ್ಯಾಜ್ಯ ವಸ್ತುಗಳು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿವೆ.

Jaya Refrigeration and Air Condition

ಇದರ ಜೊತೆಗೆ, ಕುಳಿತುಕೊಳ್ಳಲು ನಿರ್ಮಿಸಿರುವ ಆಸನಗಳು ಹಾಳಾಗಿದ್ದು, ಮಳೆಯ ಸಮಯದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು ತಂಗುದಾಣದೊಳಗೆ ಕುಳಿತುಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ತಂಗುದಾಣವೇ ಇಂದು ಗಲೀಜಿನ ತಂಗುದಾಣವಾಗಿ ಪರಿಣಮಿಸಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪುತ್ತೂರು ಶಾಸಕರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.