Akshaya Sharadhotsava
Darbe Salon
Mahalingeshwara Car Air Condition
New Dot Dress Mart

ವಯನಾಡ್: ಸುರಂಗ ರಸ್ತೆ ನಿರ್ಮಾಣ ಪ್ರದೇಶದಿಂದ ಮಣ್ಣು ತೆಗೆಯಲು ಜೂನ್‌ 20 ರಂದೇ ಗುತ್ತಿಗೆದಾರರಿಗೆ ಆದೇಶ ಹೊರಡಿಸಲಾಗಿತ್ತು. ಆದ್ರೆ ಅವರು ನಿಯಮ ಪಾಲಿಸದ ಕಾರಣ ಭೂಕುಸಿತ (Wayanad Landslide) ಸಂಭವಿಸಿದೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ ಸತೀಶನ್‌ (VD Satheesan) ಹೇಳಿದ್ದಾರೆ.

Out Look Fashion

ಮೆಪ್ಪಾಡಿ (Meppady) ಭೂಕುಸಿತ ದುರಂತದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಸತೀಶನ್‌, ಮೀನಂಗಡಿಯ, ಕೋಝಿಕ್ಕೋಡ್‌ನ ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿವೆ. ಸುರಂಗ ರಸ್ತೆಯ ಬಳಿ ಉಂಟಾದ ಭೂಕುಸಿತದಲ್ಲಿ ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಒಬ್ಬರು ಸಾವನ್ನಪ್ಪಿದ್ದಾರೆ, 7 ಜನ ಕಾಣೆಯಾಗಿದ್ದಾರೆ. 7 ಮಂದಿಯನ್ನ ರಕ್ಷಣೆ ಮಾಡಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Jaya Refrigeration and Air Condition

ಸುರಂಗ ರಸ್ತೆ ನಿರ್ಮಾಣ (Wayanad Tunnel Road Project) ಪ್ರದೇಶದಿಂದ ಮಣ್ಣನ್ನ ತೆಗೆಯಲು ಗುತ್ತಿಗೆದಾರರಿಗೆ ಜೂನ್‌ 20 ರಂದೇ ಹೇಳಲಾಗಿತ್ತು. ವಿಪತ್ತು ನಿರ್ವಹಣಾ ಇಲಾಖೆ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳು ಈ ಸಂಬಂಧ ಆದೇಶ ಹೊರಡಿಸಿದ್ದರು. ಲೋಕೋಪಯೋಗಿ ಇಲಾಖೆ ಸಚಿವರೂ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದರು. ಆದ್ರೆ ಗುತ್ತಿಗೆದಾರರು ಆದೇಶ ಪಾಲಿಸಿಲ್ಲ. ಇದರ ಪರಿಣಾಮ ಇಂದು ದುರಂತ ಸಂಭವಿಸಿದೆ ಎಂದು ವಿವರಿಸಿದ್ದಾರೆ.