Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಪುತ್ತೂರು, ಜು. 5: ಪುತ್ತೂರಿನ ಜಿಮ್ ಟ್ರೈನರ್ ಆಗಿ ಪರಿಚಿತರಾಗಿದ್ದ ಸಚಿನ್ ರೈ ಅವರು ಇಂದು ಮುಂಜಾನೆ ಅಕಾಲಿಕವಾಗಿ ನಿಧನರಾಗಿದ್ದಾರೆ.

Out Look Fashion
Screenshot

ಮೂಲತಃ ಮಡಂತ್ಯಾರ್ ನಿವಾಸಿಯಾಗಿದ್ದ ಸಚಿನ್ ರೈ, ಪ್ರಸ್ತುತ ಪುತ್ತೂರಿನ ಕಲ್ಲಿಮಾರ್‌ನಲ್ಲಿ ವಾಸವಿದ್ದು, ಹಲವು ವರ್ಷಗಳಿಂದ ಜಿಮ್ ಟ್ರೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Jaya Refrigeration and Air Condition

ಇಂದು ಮುಂಜಾನೆ ಅವರು ಕುಸಿದು ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಸಚಿನ್ ರೈ ಅವರ ನಿಧನದ ಸುದ್ದಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಜಿಮ್ ವಲಯದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

ಮೃತ್ಯುವಿನ ನಿಖರ ಕಾರಣ ಹಾಗೂ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.